FAQ About Prajaakeeya/ಪ್ರಜಾಕೀಯ
57. ಪ್ರಜಾಕೀಯದ ವಿಚಾರಗಳನ್ನು ಜನರಿಗೆ ತಿಳಿಸುವುದನ್ನು ಪ್ರಚಾರ ಎಂದು ಯಾಕೆ ಕರೆಯಬಾರದು?
*ಪ್ರಚಾರ-Publicity, ಮಾಹಿತಿ- Information*
ಪ್ರಚಾರ ಎಂದರೆ, ಮಿಥ್ಯಾ ಹಾಗು ಸುಳ್ಳು ಪ್ರಪಂಚವನ್ನು ರೂಪಿಸಿ, ಜನರ ಮನಸ್ಸನ್ನು ತಮಗೆ ಬೇಕಾದ ಹಾಗೆ ಓಲೈಸುವುದು. ಯಾವುದೇ ಒಂದು ವಸ್ತುವನ್ನು ಜನರು ಖರೀದಿಸುವಂತೆ ಮಾಡಲು, ಆ ವಸ್ತುವನ್ನು ವೈಭವಿಕರಣ ಮಾಡುವುದು, ಅಥವಾ ಯಾವುದೇ ಒಂದು ತತ್ವ, ನೀತಿ, ನಿಯಮ, ವ್ಯಕ್ತಿ, ಪಕ್ಷ, ಇತ್ಯಾದಿಗಳನ್ನು ವೈಭವಿಕರಣ ಮಾಡಿ, ಜನರ ಮನಸ್ಸಿನಲ್ಲಿ, ಒಂದು ಮಿಥ್ಯಾ ಪ್ರಪಂಚವನ್ನೆ ನಿರ್ಮಾಣ ಮಾಡುವುದು, ಜನರನ್ನು, ಸೂಕ್ಷ್ಮವಾದ ವಿಷಯದಿಂದ (ಧರ್ಮ, ಜಾತಿ, ಪಂಗಡ, ಸಂಸ್ಕ್ರತಿ, ಭಾಷೆ, ಇತ್ಯಾದಿ) ಕೆರಳಿಸಿ, ಜನರ ಅಭಿಪ್ರಾಯವನ್ನು ಕೇಂದ್ರೀಕರಿಸುವುದು. ಕೆಲವು ಪ್ರಜಾಕೀಯ ಅನುಯಾಯಿಗಳ ಅಭಿಪ್ರಾಯದಂತೆ, ಪ್ರಜಾಕೀಯದಲ್ಲಿ ಪ್ರಚಾರ ಎಂಬ ಶಬ್ದವನ್ನು ಉಪಯೋಗಿಸುವುದು ಸರಿ ಅಲ್ಲ. ಪ್ರಜಾಕೀಯದಲ್ಲಿ, ನಾವು ಪ್ರಜೆಗಳಿಗೆ, ಪ್ರಜಾಕೀಯದ ಮಾಹಿತಿ(Information) ಕೊಡುತ್ತಿದ್ದೇವೆ. ಇಲ್ಲಿ ಓಲೈಕೆ ಅಥವಾ ಮಿಥ್ಯಾ ಪ್ರಪಂಚವನ್ನು ತೋರಿಸುವುದಿಲ್ಲ. ಇದು ಸತ್ಯ ಹಾಗು ಒಂದು ಮೌನ ಕ್ರಾಂತಿ. ಆದ್ದರಿಂದ, ಪ್ರಜೆಗಳಿಗೆ, ಪ್ರಜಾಕೀಯದ ಮಾಹಿತಿ ತಲುಪಿಸುವೆವು. ಮಾಧ್ಯಮಗಳು, ದೇಶದಲ್ಲಿರುವ ಪ್ರಜೆಗಳಿಗೆ, ದೇಶದಲ್ಲಿ ನಡೆಯುತ್ತಿರುವ ಹಾಗು- ಹೋಗುಗಳ ಮಾಹಿತಿ ತಲುಪಿಸುವುದು ಹಾಗು ತಲುಪಿಸುವ ಮಾಧ್ಯಮಗಳು, ಟೆಲಿವಿಷನ್, ರೇಡಿಯೋ, ಮುದ್ರಣ, ಸಾಮಾಜಿಕ ಜಾಲತಾಣ, ಅಂತರ್ ಜಾಲ, ಇತ್ಯಾದಿಗಳನ್ಞು ಉಪಯೋಗಿಸುವುದು. ಆದರೆ, ನಮ್ಮ ದೇಶದ ದುರಾಧೃಷ್ಟ, ಮಾಧ್ಯಮಗಳು, ಮಾಹಿತಿ ಒದಗಿಸುವ ಕೇಂದ್ರಗಳಾಗಿ ಇರದೆ, ಯಾವುದೊ ಒಂದು ಪಕ್ಷದ ಪ್ರಚಾರ ಮಾಧ್ಯಮ( Advertisement Company) ಗಳಾಗಿವೆ. ನಾವು ಪ್ರಜಾಕೀಯದ ಪ್ರತಿಯೊಬ್ಬ ಅನುಯಾಯಿಯು, ಪ್ರಜೆಗಳಿಗೆ, ಪ್ರಜಾಕೀಯದ ಮಾಹಿತಿ ಒದಗಿಸುವ ನಿಜವಾದ ಮಾಧ್ಯಮಗಳಾಗೋಣ. ಸತ್ಯಕ್ಕೆ ಪ್ರಚಾರ ಬೇಡ. ಸತ್ಯದ ಮಾಹಿತಿ ತಲುಪಿಸೋಣ.ಆದ್ದರಿಂದ ಪ್ರಜಾಕೀಯದಲ್ಲಿ ಪ್ರಚಾರ ಎಂಬ ಶಬ್ದವನ್ನು ಉಪಯೋಗಿಸುವುದನ್ನು ನಿಲ್ಲಿಸಿದರೆ ಉತ್ತಮ. ನಾವು ಕೇವಲ ಪ್ರಜಾಕೀಯದ ಮಾಹಿತಿ ಕೊಡುತ್ತಾ ಹೋಗೋಣ.
*ಪ್ರಚಾರ ಬೇಡ*, *ಮಾಹಿತಿ ತಲುಪಿಸೋಣ*.